Monday, January 20, 2014

ಕನಸುಗಳು ರೆಕ್ಕೆ ಬಿಚ್ಚಿದಾಗ


























ಕನಸುಗಳು ರೆಕ್ಕೆ ಬಿಚ್ಚಿದಾಗ
ಯಾರ ಹಂಗಿಗೂ ಸಿಗದೆ
ಭೂಮಿ, ಆಕಾಶ, ಬೆಟ್ಟ ಗುಡ್ಡ
ಸ್ವಚ್ಚಂದ ಗಾಳಿ
ತಬ್ಬಿ ಮುತ್ತಿಕ್ಕುತ್ತಿವೆ...

ಹೆಜ್ಜೆಗಳು ಸವೆದ ದಾರಿ
ಯಾರೋ ಬಳಿದ ಬಣ್ಣ
ನೆಟ್ಟ ಪೈರು
ಮೊಳಕೆ ಹೊಡೆದ ಬೀಜ
ನೋಡುವ ಕಣ್ಣಿಗೆ ಹದ...

ಕನಸುಗಳು ರೆಕ್ಕೆ ಬಿಚ್ಚಿದಾಗ
ನಾನು ಯಾರು?
ನೀನು ಯಾರು?
ಕನಸುಗಳಿಗೆ
ರೆಕ್ಕೆ ಕೊಟ್ಟವರ್ಯಾರು?

ಮೌನವ ಆತುಕೊಂಡು
ನಿಂತಲ್ಲೇ ತಪ್ಪಸಿಗೆ ಕೂತ
ಗಿರಿವನದಲಿ
ಹಕ್ಕಿಗಳ ಕಲರವ
ಚಿಲಿಪಿಲಿ ನಾದಸ್ವರ
ಮೌನಗೀತೆಯ ಮಧುರ... ಮಧುರ...

ಹೂಗಳ ಗಮಲು, ಗಮಲು
ಪಸರಿಸಿತು
ಎದೆಯಿಂದ ಎದೆಗೆ...

No comments:

Post a Comment